
3rd April 2025
ಯಾದಗಿರಿ : ಶಾಂತಿನಿಕೇತನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಿ ಯಾದಗಿರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರ ಸಹಯೋಗದಲ್ಲಿ ಯಾದಗಿರಿ ಸಮೀಪದ ಪಗಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಗಿರಿ ಜಿಲ್ಲೆಯ ಜಾನಪದ ತತ್ವಪದಗಳ ಸಂಗೀತೋತ್ಸವ ಕಾರ್ಯಕ್ರಮವನ್ನು ಸಾಹಿತಿ ರುಚಿ ಪರಸನಹಳ್ಳಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರು ಪೂರ್ವ ಕಾಲದಿಂದಲೂ ಜಾನಪದ ತತ್ವಪದಗಳ ಅವರು ಮಾಡುವ ಕಾಯಕ ಅಂದರೆ ಅಂತಿಪದಗಳು.ರೈತರ ಪದಗಳು ನಿರಂತರವಾಗಿ ಹಾಡುತ್ತಾ ತಮ್ಮ ಬೆಸರವನ್ನು ಕಳೆಯುತ್ತಿದ್ದರು ಅಂತಹ ಗ್ರಾಮೀಣ ಹಾಡುಗಳು ಇತ್ತಿಚೆಗೆ ಕಡಿಮೆಯಾಗುತ್ತಿವೆ ಆದ್ದರಿಂದಲೇ ಈ ಶಾಂತಿನಿಕೇತನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಯಾದಗಿರಿ ಕೈಗೊಳ್ಳುವ ಮೂಲಕ ಶ್ರಮಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು
ದಿವ್ಯ ಸಾನ್ನಿಧ್ಯ ವಹಿಸಿದ್ದ ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷರಾದ ವೈಜನಾಥ ಹಿರೇಮಠ ಮಾತನಾಡಿ ಗ್ರಾಮೀಣ ಪ್ರದೇಶದ ಜನರು ಜಾನಪದ ತತ್ವಪದಗಳ ಸಾಂಸ್ಕೃತಿಕ ಸಂಗೀತೋತ್ಸವ ಕಾರ್ಯಕ್ರಮವನ್ನು ಶಾಂತಿನಿಕೇತನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಯಾದಗಿರಿ ಇವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಜಾನಪದ ತತ್ವಪದಗಳು ಹಾಡುವ ಕಲಾವಿದರ ತಂಡಗಳು ಕರೆತಂದು ಹಾಡಿಸುವ ಕಾರ್ಯವನ್ನು ಗಮನಿಸಿದಾಗ ನಮ್ಮ ಪುರಾತನ ಹಾಡುಗಳಿಗೆ ಮೂರು ಜೀವ ಕೊಟ್ಟಂತಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಲ ಭಜನ ಇವರು ಮಾತನಾಡಿ ನಮ್ಮ ಸಂಸ್ಥೆಯು ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾನಪದ ತತ್ವಪದಗಳ ಹಾಡು ನಿರಂತರವಾಗಿ ನಡೆಯುವಂತೆ ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೇವಿಂದ್ರಪ್ಪ ಎಸ್ ಕರಡಕಲ್ ಶಿಕ್ಷಕರು ಸಾಹಿತಿಗಳು, ಡಾ.ವೆಂಕಟೇಶ್ವರ ಕೆ ಕಲಾಲ್ ಮತ್ತು ಅಮರಗುಂಡಪ್ಪ ಹೂಗಾರ ಸೇರಿದಂತೆ ಅನೇಕರು ಮಾತನಾಡಿದರು.
ಜಾನಪದ ತತ್ವಪದಗಳ ಸರ್ದಾರ್ ಎಂದು ಪ್ರಖ್ಯಾತಿಯನ್ನು ಗಳಿಸಿರುವ ಬಂಗಾರೆಪ್ಪ ಹೊಸಮನಿ ಬಸವಂತಪೂರ ಹಾಗೂ ಹಾಸ್ಯ ಕಲಾವಿದರಾದ ಅಮರಗುಂಡಪ್ಪ ಹೂಗಾರ ಒಂಟಿ ಸವಾರಿ ಸಿಂಧನೂರು ಮತ್ತು ಸಾಬಣ್ಣ ಪಗಲಾಪೂರ ಇವರಿಂದ ಜಾನಪದ ತತ್ವಪದಗಳ ಹಾಡು ಹೇಳಿದರು ಜೊತೆಗೆ ಶಾಂತಿನಿಕೇತನ ಕಲಾ ತಂಡಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಳ್ಳಿಯ ಸೋಗಡು ಜಾನಪದ ಹಾಡು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಿದ್ದಯ್ಯ ಮಠ ನಿವೃತ್ತ ಉಪನ್ಯಾಸಕರು ರಂಗಪೇಠ, ಕವಿತಾ ಜುಗೇರಿ, ಅಮರಗುಂಡಪ್ಪ ಹೂಗಾರ ಒಂಟಿ ಸವಾರಿ, ಬಂಗಾರೆಪ್ಪ ಹೊಸಮನಿ ಬಸವಂತಪೂರ, ನಿರ್ಮಲಾ ಗೋಪಾಳಪೂರ, ಚಂದ್ರಶೇಖರಯ್ಯ ಹಿರೇಮಠ ಪರಸನಹಳ್ಳಿ, ರಮಾದೇವಿ ಕಾವಲಿ ಸೇರಿದಂತೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಯಪ್ಪ ಮುನಿ ಇಟ್ಕಲ್ ಮುಖ್ಯ ಗುರುಗಳು ಶೇಟ್ಟಕೇರಾ, ಪಗಲಾಪೂರ ಗ್ರಾಮದ ಗಣ್ಯರು ,ಹಿರಿಯರು ಅನೇಕರು ಉಪಸ್ಥಿತರಿದ್ದರು
ತಬಲಾ ಮತ್ತು ಸಂಗೀತ ಹಾರ್ಮೋನಿಯಂ ಸೇವೆಯನ್ನು ಶರಣು ಕೊಲ್ಕುಂದ್, ಮಹೇಶ್ ಶಿರವಾಳ ಮತ್ತು ವೀರಭದ್ರ ವಿಶ್ವಕರ್ಮ ಇವರಿಂದ ನಡೆಯಿತು
ಕಾರ್ಯಕ್ರಮವನ್ನು ನಿರ್ಮಲಾ ಗೋಪಾಳಪೂರ ಸ್ವಾಗತಿಸಿದರೇ, ಖ್ಕುಯಾತ ನಿರೂಪಕಿ. ರೇಣುಕಾ ಎಂ ಕುಂಬಾರಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗ್ಯಾರಂಟಿ ಯೋಜನೆ ಪ್ರಗತಿಯ ಕಿರುಹೊತ್ತಿಗೆ ಬಿಡುಗಡೆ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಅನುಕೂಲ-ಸಚಿವ ತಿಮ್ಮಾಪೂರ